ಪ್ರತಿ ಗುರುವಾರ ಬಂತಂದ್ರೆ ಟಿವಿ ವೀಕ್ಷಕರಿಗೆ ಒಂದು ಕುತೂಹಲ. ಯಾಕಂದ್ರೆ, ಈ ದಿನ ಬಾರ್ಕ್ ರೇಟಿಂಗ್ ಸಂಸ್ಥೆ ಟಿವಿ ಕಾರ್ಯಕ್ರಮಗಳ ರೇಟಿಂಗ್ ಪ್ರಸಾರ ಮಾಡುತ್ತೆ. ಪ್ರತಿವಾರದಂತೆ ಈ ವಾರವೂ ರೇಟಿಂಗ್ ಪ್ರಕಟ ಮಾಡಿದೆ.ಕನ್ನಡ ಟಿವಿ ಕಾರ್ಯಕ್ರಮಗಳ ಪೈಕಿ ನಿರೀಕ್ಷೆಯಂತೆ ಧಾರಾವಾಹಿಯೊಂದು ನಂಬರ್ ವನ್ ಸ್ಥಾನದಲ್ಲಿದೆ. ಎಷ್ಟೇ ರಿಯಾಲಿಟಿ ಶೋ ಬರಲಿ, ಎಷ್ಟೇ ಹೊಸ ಬಗೆಯ ಕಾರ್ಯಕ್ರಮ ಬರಲಿ ಈ ಧಾರಾವಾಹಿಯನ್ನ ಮಾತ್ರ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.'ಬಿಗ್ ಬಾಸ್' ಅಂತಹ ಕಾರ್ಯಕ್ರಮ ಕೂಡ ಈ ಧಾರಾವಾಹಿಯನ್ನ ಹಿಂದಿಕ್ಕಲಿಲ್ವಾ ಎಂಬ ಪ್ರಶ್ನೆ ಹಲವರದ್ದು. ಹಾಗಿದ್ರೆ, ಆ ಧಾರಾವಾಹಿ ಯಾವುದು? ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಪುಟ್ಟಗೌರಿ ಮದುವೆ' ಧಾರಾವಾಹಿ ಬಾರ್ಕ್ ಸಂಸ್ಥೆ ಪ್ರಕಟ ಮಾಡಿರುವ ರೇಟಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ.'ಪುಟ್ಟಗೌರಿ ಮದುವೆ' ಮೊದಲ ಸ್ಥಾನದಲ್ಲಿದ್ರೆ, ನಂತರದ ಸ್ಥಾನದಲ್ಲಿ ಕ್ರಮವಾಗಿ, 'ಲಕ್ಷ್ಮಿ ಬಾರಮ್ಮ', 'ಕುಲವಧು', 'ರಾಧ ರಮಣ', ಮತ್ತು 'ಕಿನ್ನರಿ' ಧಾರಾವಾಹಿ ಇದೆ.